Friday, August 09, 2019

ನಾಡೋಜ ಕವಿ ಕಯ್ಯಾರ ಕಿಂಞಣ್ಣ ರೈ ಅವರ ಸಂಸ್ಮರಣ ಕಾರ್ಯಕ್ರಮವು ತಾ 9.8.2019ನೇ ಶುಕ್ರವಾರ ಅಪರಾಹ್ನ 3.00ಕ್ಕೆ ಸರಿಯಾಗಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಜರಗಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನ ಯಶಸ್ಸು ಗೊಳಿಸಿದರು.







Tuesday, August 06, 2019

ನಮ್ಮ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ದಿ. ನೇರೋಳು ನಿಡುವಜೆ ರಾಮಚಂದ್ರ ಭಟ್ ಮತ್ತು ದಿ.ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.ಧರ್ಮತ್ತಡ್ಕ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.








Thursday, August 01, 2019

Ramayanaprashnotthari


Tuesday, July 16, 2019


ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಸಂಸ್ಕøತ ಸಂಘದ ಆಶ್ರಯದಲ್ಲಿ ಸಂಸ್ಕøತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗುರುಪೌರ್ಣಿಮೆ ಉತ್ಸವವನ್ನು ಮಂಗಳವಾರ ಆಚರಿಸಲಾಯಿತು.
      ಕಾರ್ಯಕ್ರಮವನ್ನು ಹೈಯರ್ ಸೆಕೆಂಡರಿ ಅಧ್ಯಾಪಕ ಸತೀಶ ಶೆಟ್ಟಿ ಒಡ್ಡಂಬೆಟ್ಟು ಉದ್ಘಾಟಿಸಿ ಮಾತನಾಡಿ, ಗು ಎಂದರೆ ಕತ್ತಲು, ರು ಎಂದರೆ ಬೆಳಕು ಎಂದರ್ಥ. ತಲತಲಾಂತರಗಳಿಂದ ಬಂದ ಸಂಪ್ರದಾಯವಾದ ಗುರುಗಳನ್ನು ಗೌರವಿಸುವ ರೀತಿ ನಮ್ಮ ಇಂದಿನ ಶಿಕ್ಷಣ ರೀತಿಯಲ್ಲಿ ಬರಬೇಕು ಎಂದರು.
        ಶಾಲಾ ಮುಖ್ಯಶಿಕ್ಷಕ ಎನ್. ರಾಮಚಂದ್ರ ಭಟ್ ಶುಭಾಶಂಸನೆಗೈದು ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ಬದಲಾಗಿ ಶಾಲೆಯಲ್ಲಿಯೂ ಕೂಡಾ ಗುರುಗಳನ್ನು ಶಿಷ್ಯರು ಪೂಜನೀಯ ಮನೋಭಾವದಿಂದ ಗೌರವಿಸುವಂತೆ ಆಗಬೇಕು. ಈ ತಿಂಗಳ ಪೂರ್ತಿ ಹಲವೆಡೆಗಳಲ್ಲಿ ದೇವರನ್ನು ಪೂಜಿಸುತ್ತಾರೆ. ಕೇರಳದಲ್ಲಿ ರಾಮಾಯಣ ಪಾರಾಯಣ ಮಾಡುತ್ತಾರೆ. ಹಾಗಾಗಿ ರಾಮಾಯಣ ಮಾಸಾಚರಣೆ ಅಂತ ಈ ತಿಂಗಳು ಪೂರ್ತಿ ತಿಳಿಯಲ್ಪಡುತ್ತದೆ ಎಮದು ತಿಳಿಸಿದರು.
      ಹಿರಿಯ ಅಧ್ಯಾಪಕ ಗೋವಿಂದ ಭಟ್ ಶುಭಾಶಂಸನೆಗೈದು ಮಾತನಾಡಿದರು. ಸಂಸ್ಕøತ ಅಧ್ಯಾಪಕ ಶಿವನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ತಿಂಗಳಪೂರ್ತಿ ನಡೆಸಲಿರುವ ಶ್ರೀ ರಾಮರಕ್ಷಾ ಸ್ತೋತ್ರ ಪಠಣಕ್ಕಿರುವ ರಾಮರಕ್ಷಾ ಸ್ತೋತ್ರ ಪುಸ್ತಕವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
     ಶಾರದ ಸುರಭಿ ಸ್ವಾಗತಿಸಿ, ಸಂಸ್ಕøತ ಸಂಘದ ಜೊತೆ ಕಾರ್ಯದರ್ಶಿ ಅಕ್ಷಯ ಗಣಪತಿ ವಂದಿಸಿದರು. ಸಂಸ್ಕøತ ಸಂಘದ ಕಾರ್ಯದರ್ಶಿ ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಹಕರಿಸಿತ್ತು.













Monday, July 08, 2019

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ  2019-2020

ಧರ್ಮತ್ತಡ್ಕ : ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ  ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 4-07-2019ರಂದು ಜರಗಿತು. ಸಂಘದ ಅಧ್ಯಕ್ಷ ಶ್ರೀ ಶ್ರೀ ಗಿರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದರು.ಮುಖ್ಯೋಪಾಧ್ಯಾಯರಾದ  ಎನ್. ರಾಮಚಂದ್ರ ಭಟ್ ಪ್ರಾಸ್ತಾವಿಕ ಭಾಷಣ ಹಾಗೂ ಶಾಲಾ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರನಾರಾಯಣ ಭಟ್ ಶಾಲಾ ಅಭಿವೃದ್ಧಿ ಯೋಜನೆಯ ಕುರಿತು ಮಾತನಾಡಿದರು. ಶ್ರೀಮತಿ ಶ್ವೇತಾ ಟೀಚರ್ ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಾಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ಇಬ್ರಾಹಿಂ ಎ ,ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ  ,ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ  ಶ್ರೀ ಜಾನ್ ಡಿಸೋಜಾ ,ಮಾತೃ ಸಂಘದ ಉಪಾಧ್ಯಕ್ಷೆಯಾಗಿ ಶ್ರೀಮತಿ ಜಯಲಕ್ಷ್ಮಿ   ಇವರು ಆಯ್ಕೆಗೊಂಡರು.ಅಲ್ಲದೆ 18 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಹೈಯರ್ ಸೆಕೆಂಡರಿ ವಿಭಾಗದ ಪ್ರಭಾರ ಪ್ರಾಂಶುಪಾಲರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ  ಅವರು ಶುಭ ಹಾರೈಸಿದರು.ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು.ಶಾಲಾ ಅಧ್ಯಾಪಿಕೆಯರಾದ ಶ್ರೀಮತಿ ಪದ್ಮಶ್ರೀ,ದಿವ್ಯಶ್ರೀ ನವ್ಯಶ್ರೀ ಪ್ರಾರ್ಥಿಸಿದರು. ಶ್ರೀಮತಿ ಉಮಾ ದೇವಿ ಇವರು ಸ್ವಾಗತಿಸಿ, ಶ್ರೀ ರಾಮ ಕೃಷ್ಣ ಭಟ್ ವಂದಿಸಿದರು. ಶ್ರೀ ಗೋವಿಂಧ ಭಟ್ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ  ಲಘು ಉಪಹಾರವನ್ನು ನೀಡಲಾಯಿತು. 








 

Sunday, July 07, 2019