ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕಯಲ್ಲಿ ಲಿಟಲ್ ಕೈಟ್ಸ್ ನ ಉದ್ಘಾಟನೆ : ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಮಕ್ಕಳಲ್ಲಿ ಬೆಳೆಸಲು ಮಾಹಿತಿ ತಂತ್ರಜ್ಞಾನವು ಬಹಳ ಪ್ರಯೋಜನಕಾರಿ ಎಂದು ಧರ್ಮತ್ತಡ್ಕ ಶಾಲಾ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಎನ್. ರಾಮಚಂದ್ರ ಭಟ್ ತಿಳಿಸಿದರು.ಇವರು ಶಾಲಾ ಲಿಟಲ್ ಕೈಟ್ಸ್ ಕ್ಲಬ್ ನ್ನು ಉದ್ಘಾಟಿಸಿ ಕ್ಲಬ್ ನ ಸದಸ್ಯರಿಗೆ ಶುಭ ಹಾರೈಸಿದರು. 25 ಸದಸ್ಯರಿರುವ ಕ್ಲಬ್ ಗೆ ಶಾಲಾ ಶಿಕ್ಷಕರಾದ ಶ್ರೀ ಈ ಯಚ್ ಗೋವಿಂಧ ಭಟ್ ಶುಭ ಹಾರೈಸಿದರು. ಕ್ಲಬ್ ನ ಸಂಚಾಲಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಉಪಸಂಚಾಲಕರಾದ ಶ್ರೀ ಪ್ರದೀಪ್ ಕರುವಜೆ ವಂದಿಸಿದರು. ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಗೆ ಒಂದು ದಿನದ ವಿಶೇಷ ತರಬೇತಿಯನ್ನು ನೀಡಲಾಯಿತು.
Thursday, June 27, 2019
Sunday, June 23, 2019
Friday, June 21, 2019
ಧರ್ಮತ್ತಡ್ಕ : ಕ್ಲಬ್ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳೆಸಲು ಸಾಧ್ಯ. ಇದರಿಂದ ಅವರಿಗೆ ಆತ್ಮ ಸ್ಥೆರ್ಯ ತುಂಬುವುದು ಎಂದು ಮುಖ್ಯೋಪಾಧ್ಯಾಯರಾದ ಎನ್. ರಾಮಚಂದ್ರ ಭಟ್ ತಿಳಿಸಿದರು. ಇವರು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಶಾಲಾ ವಿವಿಧ ಕ್ಲಬ್ ಗಳನ್ನು ಉದ್ಗಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಶ್ರೀ ಈ ಯಚ್ ಗೋವಿಂಧ ಭಟ್, ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಉಷಾ ಕೆ ಆರ್ ಇವರು ಕ್ಲಬ್ ಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 10ಕ್ಕಿಂತಲೂ ಹೆಚ್ಚು ಕ್ಲಬ್ ಗಳು ರೂಪೀಕರಿಸಲ್ಪಟ್ಟು ಸದಸ್ಯರಿಂದ ಪ್ರಭಂದ ಮಂಡನೆ, ಹಾಡು ಮುಂತಾದ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಶಾರಧ ಸುರಭಿ ಸ್ವಾಗತಿಸಿ ,ವಿವೇಕ್ ರೈ ವಂದಿಸಿದರು. ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು.
Wednesday, June 19, 2019
Wednesday, June 12, 2019
Subscribe to:
Posts (Atom)


















