Monday, May 06, 2019

ಧರ್ಮತ್ತಡ್ಕ ಶಾಲೆಯ 4 ಮಂದಿಗೆ ಎಲ್ಲಾ ವಿಷಯದಲ್ಲಿ A+....

 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ 4 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ Dhanyashree,
 Swarna,
 Manisha,
 Sathwik Krishna ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಶುಭಾಶಯಗಳು...





Thursday, February 07, 2019

*ಪರೀಕ್ಷೆ-ನಿರೀಕ್ಷೆ*
ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ದಿನಾಂಕ 7-2-2019 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರ *ಪರೀಕ್ಷೆ-ನಿರೀಕ್ಷೆ* ಕಾರ್ಯಕ್ರಮ ನಡೆಯಿತು. 
ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಶಂಕರನಾರಾಯಣ ಭಟ್  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತನಾರಾಯಣ ಪದಕಣ್ಣಾಯ, ಶ್ರೀ ಭಾರತೀ ಕಾಲೇಜು ನಂತೂರು ಶುಭ ಹಾರೈಸಿದರು.
   " ಪರೀಕ್ಷೆ ಯಲ್ಲಿ ವಿದ್ಯಾರ್ಥಿಯೊಬ್ಬ ಚೆನ್ನಾಗಿ ಉತ್ತರದಲ್ಲಿ ಅಧ್ಯಾಪಕರ ಮನಸ್ಸು ಅರಳುತ್ತದೆ. ಚೆನ್ನಾಗಿ ತಯಾರಿನಡೆಸಿದ್ದಲಿ ಉತ್ತರ ತಿಳಿದಲ್ಲಿ ವಿದ್ಯಾರ್ಥಿಯ ಮುಖದಲ್ಲಿ ಮಂದಹಾಸ ಮೂಡುತ್ತದೆ '' ಎಂದು ಶ್ರೀಯುತ ಉಂಡೆಮನೆ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮದತ್ತ ಸೆಳೆಯುತ್ತಾ ವಿಶೇಷ ತರಗತಿ ಆರಂಭಿಸಿದರು. ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅರ್ಥೈಸಿಕೊಂಡು ಮಾಡುವುದು ಬಹು ಮುಖ್ಯ ಅಂಶ ಎಂಬುದನ್ನು ನೆನಪಿಸಿದರು. ಓದುವ ವೇಳಾಪಟ್ಟಿ, ಅಗತ್ಯದ ವಿಶ್ರಾಂತಿ, ಮನೋದೈಹಿಕ ಚಟುವಟಿಕೆಗಳು, ಪೂರಕವಾಗಿ ಯುಕ್ತ ಆಹಾರದ ಅಗತ್ಯ ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. 180 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಸ್ಥಳಾವಕಾಶವಿತ್ತು 
 ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ  ಶ್ರೀಯುತ ರಾಮಚಂದ್ರ ಭಟ್  ನೇರೋಳು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಇ.ಎಚ್. ಗೋವಿಂದ ಭಟ್ ಅವರು ಧನ್ಯವಾದವಿತ್ತರು. ಕೇಶವಪ್ರಸಾದ ಎಡಕ್ಕಾನ ಪರೀಕ್ಷೆ - ನಿರೀಕ್ಷೆ ಕಾರ್ಯಕ್ರಮ ಸಂಯೋಜನೆ ಮಾಡಿದರು. 





Thursday, January 24, 2019

Saturday, December 15, 2018

Monday, December 10, 2018

ಕೇರಳ ರಾಜ್ಯ ಮಟ್ಟದ ಕಲೋತ್ಸವದ ತಬಲಾ ವಾದನದಲ್ಲಿ 14 ಸ್ಪರ್ಧಾಳುಗಳೊಂದಿಗೆ ಸ್ಪರ್ಧಿಸಿ A grade ನೊಂದಿಗೆ 6 ನೇ ಸ್ಥಾನವನ್ನು ತನ್ನದಾಗಿಸಿದ SDPHS Dharmathadkada ದ 9 ನೇ ತರಗತಿಯ ವಿಕಾಸ್ ಕೆ.ಎಚ್.
ಅಭಿನಂದನೆಗಳು.👏👏👏





Saturday, December 08, 2018

ಒಂದು ರಂಗಯಾತ್ರೆ...
ಉಪಜಿಲ್ಲಾ ಮಟ್ಟದಿಂದ  ರಾಜ್ಯ ಮಟ್ಟದ ವರೆಗೂ ಮಕ್ಕಳ ಪ್ರತಿಭಾ ಪೋಷಣೆಗೆ ನ್ಯಾಯಯುತ ಬೇಡಿಕೆಗಾಗಿ ನಡೆಸಿದ ಹೋರಾಟದ ಹಾದಿ ನನಗೆ ಬಲವನ್ನು ನೀಡಿದೆ.
 ಶಾಲಾ ಕಲೋತ್ಸವದ ಜಿಲ್ಲಾ ಮಟ್ಟದಲ್ಲಿ ಹಲವು ವರ್ಷಗಳಿಂದ ನಡೆದು ಬಂದ ಕನ್ನಡ ಮಕ್ಕಳ ಅವಗಣನೆಗೆ ಸರಿಯಾದ ಉತ್ತರ ನೀಡಿದ್ದಾರೆ ಮಕ್ಕಳು....  ಕನ್ನಡ ಮಕ್ಕಳ ರಂಗಭೂಮಿ ಇನ್ನಷ್ಟು ವಿಕಾಸಗೂಳ್ಳಬೇಕಾಗಿದೆ. ನಾವು ಎಡವಿದ ಹಲವಾರು ರಂಗವಿಚಾರಗಳನ್ನು ಕಲಿತುಕೊಳ್ಳಲು, ಹೊಸ ರಂಗ ತಂತ್ರಗಳನ್ನು ಆವಿಷ್ಕರಿಸಲು ಸಹಾಯಕವಾಗಿತ್ತು ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಅನುಭವ. ಕಾಸರಗೋಡಿನಲ್ಲಿ ಮಕ್ಕಳ ಕನ್ನಡ ರಂಗಭೂಮಿ ಬೆಳವಣಿಗೆಯಲ್ಲಿ  ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಂತಹ ಕನ್ನಡ ರಂಗಭೂಮಿ ಪರವಾಗಿರುವ ಅನೇಕ ಶಾಲೆಗಳು ಮುಂದೆ ಬರಬೇಕಾದ ಅಗತ್ಯವಿದೆ. ಸೋಲಿನಲ್ಲಿ ಕುಗ್ಗದೆ,ಮಕ್ಕಳ ಪ್ರತಿಭೆಗಾಗಿ ಪ್ರಯತ್ನಿಸಿ ಯಶಸ್ಸನ್ನು ಕಂಡ ಶಾಲೆಯ ಆಡಳಿತ ಮಂಡಳಿ ಅಧ್ಯಾಪಕ ವೃಂದದವರನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುತ್ತೇನೆ. 
ಈ ರಂಗಯಾತ್ರೆಯಲ್ಲಿ ಜೊತೆಯಾಗಿನಿಂತ ತಂಡದ ಸಂಚಾಲಕರು, ಶಾಲಾವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ತಂಡದ ಮ್ಯಾನೇಜರ್ ಮತ್ತು ಸಹನಿರ್ದೇಶನ ಮಾಡಿದ ಶಿವಪ್ರಸಾದ್ ಚೆರುಗೋಳಿ, ಪ್ರಶಾಂತ ಹೊಳ್ಳ ಎನ್, ಮನೂಹರ ಸಂಗೀತವನ್ನು ನೀಡಿದ ಮೆಲ್ವಿನ್ ಪೆರ್ಮುದೆ,ರಂಗಪರಿಕರ,ಮುಖವರ್ಣಿಕೆಯಲ್ಲಿ ವಿಶೇಷ ಕಾಳಜಿ ವಹಿಸಿದ ವರದರಾಜ ಬಾಯರು ಹಾಗೂ ವಸಂತ ಮೂಡಂಬೈಲು,ಎಲ್ಲದಕ್ಕಿಂತಲು ಮಿಗಿಲಾಗಿ ಅತ್ಯದ್ಭುತ ಅಭಿನಯ ನೀಡಿದ ನನ್ನ ಪುಟಾಣಿ ಚಿನ್ನರಿಗೆ ಅಭಿನಂದನೆಗಳು.ತಂಡದಜೊತೆಗಿದ್ದು ಶಾಲಾ ಅಧ್ಯಾಪಕಾರಾದ ಪ್ರದೀಪ್ ಕರ್ವಾಜೆ, ಉಷಾಪದ್ಮ, ಉಷಾ ಕೆ ಆರ್,ಶಿವನಾರಾಯಣ ಭಟ್, ಇವರಿಗೆಲ್ಲ ಆಭಾರಿ.
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ,ಸೋಲೇ ಗೆಲುವಿನ ಸೋಪಾನ, ಕನ್ನಡ ಮಕ್ಕಳ ರಂಗಭೂಮಿಗಾಗಿ ಈ ಮಂತ್ರ ಯಾವತ್ತೂ ಮನಸ್ಸಿನಲ್ಲಿದೆ.