Wednesday, September 12, 2018

11 - 09 -2018ರಂದು ಶಾಲಾ ಮಟ್ಟದ ಹಿಂದಿ ಕ್ವಿಜ್ ಕಾರ್ಯಕ್ರಮ ಜರಗಿತು. 

ಫಲಿತಾಂಶ 

ಪ್ರಥಮ : ಸಾತ್ವಿಕ್  ಕೃಷ್ಣ ಯನ್  X  D 

ದ್ವಿತೀಯ  : ವಿವೇಕ್ ರೈ  I X   D 

Thursday, August 30, 2018

ಧರ್ಮತ್ತಡ್ಕ ಶಾಲೆಯಲ್ಲಿ 72ನೇ ಸ್ವಾತಂತ್ರ  ದಿನಾಚರಣೆ:
ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 72ನೇ ಸ್ವಾತಂತ್ರ  ದಿನಾಚರಣೆ  ಪಿ ಟಿ ಎ ಅಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್ ಕಯ್ಯಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು . ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಧ್ವಜಾರೋಹಣ ಗೈಯುವುದರೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಿವೃತ್ತ  ಸಿ ಆರ್ ಪಿಫ್ ಯೋಧ ಶ್ರೀ ಅಯ್ಯಪ್ಪ ಮಣಿಯಾಣಿ ಮತ್ತು ಪ್ಯಾರಾ ಮಿಲಿಟರಿ ಕಮಾಂಡೋ ಆಗಿರುವ ಶ್ರೀ ಸನೇಶ್  ಕುಮಾರ್ ಉಪ್ಪಳ ಇವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡರು. ಮುಖ್ಯ ಅಥಿತಿಗಳಿಂದ ಮಿಲಿಟರಿ ಸೇನೆ ಮತ್ತು ದೇಶಕ್ಕೆ ಅದರ ಮಹತ್ವದ  ಕುರಿತು ಸಂವಾದ ಕಾರ್ಯಕ್ರಮವು ನಡೆಯಿತು. ರಾಜ್ಯ ಪ್ರಶಸ್ತ ವಿಜೇತ ಶ್ರೀ ಶಂಕರ ಕಾಮತ್ ಚೇವಾರ್ ಮತ್ತು ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮವು ಜರಗಿದವು. ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಗಣ್ಯರನ್ನು ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು. ಶಿಕ್ಷಕರಾದ ಶ್ರೀ ಈ ಯಚ್ ಗೋವಿಂಧ ಭಟ್ ಕಾರ್ಯಕ್ರವನ್ನು ನಿರೂಪಿಸಿದರು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.  


Monday, August 13, 2018



ಶ್ರೀ ಶಂಕರಾಚಾರ್ಯ ಸಂಸ್ಕೃತ ಯುನಿವರ್ಸಿಟಿ' ಪ್ರತಿಭಾವಂತ ಸಂಸ್ಕೃತ ಮಕ್ಕಳಿಗೆ ಕೊಡುವ ರೂ.1000/ ಸ್ಕೋಲರ್ ಶಿಪ್ ನ್ನು ಪಡೆಯುತ್ತಿರುವ ಸಂದರ್ಭ




ಸಮಾಜ ವಿಜ್ಞಾನ ಸಂಘದ ವತಿಯಿಂದ ನಡೆದ ಸ್ವಾತಂತ್ರ ದಿನದ ಪ್ರಯುಕ್ತ ರಸ ಪ್ರಶ್ನೆ ಕಾರ್ಯಕ್ರಮವು ತಾ 13-08-2018ರಂದು ಜರಗಿತು. 

ಫಲಿತಾoಶ :
ಪ್ರಥಮ: ಸಾತ್ವಿಕ್ ಕೃಷ್ಣ  ಯನ್ (10 D) 
ದ್ವಿತೀಯ :  ಶಿವಾನಿ ಯಸ್ (9 A)


ಹಿರೋಷಿಮಾ ಮತ್ತು ನಾಗಸಾಕಿ (ಅಗಸ್ಟ್  9 ) - ಪ್ರಬಂಧ ಮಂಡನೆ ಕೆ ಯಸ್ ಸ್ವರ್ಣ ಇವಳಿಂದ