Saturday, September 09, 2017
ನಮ್ಮ ರಾಜ್ಯದ ಹಬ್ಬ ಓಣಂನ್ನು ಅಗಸ್ಟ್ 31ರಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಹೂವಿನ ರಂಗೋಲಿ ಪೂಕಳಂ ಹಾಕಲಾಯಿತು. ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ರೀತಿಯ ಸ್ಪರ್ಧೆಗಳ್ಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಅನ್ನ
, ಸಾಂಬಾರು, ಕಚಾಂಬಾರ್ ,ಮಜ್ಜಿಗೆ, ಉಪ್ಪಿನಕಾಯಿ , ಪಾಯಸ , ಹೋಳಿಗೆ ಯನ್ನೊಳಗೊಂಡ ಓಣಂ
ಸದ್ಯವನ್ನು ಮಕ್ಕಳಿಗೆ ಉಣಬಡಿಸಲಾಯಿತು .ಈ ಸಂದರ್ಭದಲ್ಲಿ ಸರಕಾರದಿಂದ ಉಚಿತವಾಗಿ
ಒದಗಿಸಿದ 5ಕಿಲೋ ಅಕ್ಕಿಯನ್ನು 8ನೇ ತರಗತಿಯ ಮಕ್ಕಳಿಗೆ ವಿತರಿಸಲಾಯಿತು.
Tuesday, August 15, 2017
71ನೇ ಸ್ವಾತಂತ್ರೋತ್ಸವ
ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 71ನೇ ಸ್ವಾತಂತ್ರೋತ್ಸವವು ಶಾಲಾ ಪ್ರಾಂಶುಪಾಲರಾದ ಶ್ರೀಯುತ ಎನ್ ರಾಮಚಂದ್ರ ಭಟ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಆರಂಭವಾಯಿತು. ಶ್ರೀ ಎನ್ ಶಂಕರನಾರಾಯಣ ಭಟ್ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಶಾಲಾ ಪ್ರಾಂಶುಪಾಲರ ಶುಭಹಾರೈಕೆಯೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳಿoದ ಸ್ವಾತಂತ್ರಕೆ ಸಂಭದಿಸಿದ ವಿವಿಧ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳಾದ ಧೀಶ ಗಣ್ಯರನ್ನು ಸ್ವಾಗತಿಸಿ,ಬಿಂದು ವಂದಿಸಿದಳು. ಜೈನಭತ್ ಅಜ್ಮೀನ ಕಾರ್ಯಕ್ರಮ ನಿರೂಪಿಸಿದಳು. ಲಘು ಫಲಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಪ್ರತಿಭಾ ಪುರಸ್ಕಾರ
2016-2017 ನೇ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೆಪೋಡು ಸುಬ್ರಾಯ ಮಯ್ಯರ ಸ್ಮರಣಾರ್ಥ ಅವರ ಮನೆಯವರು ನೀಡುವ ಪ್ರತಿಭಾ ಪುರಸ್ಕಾರ ಧನ ಸಹಾಯವನ್ನು ನೀಡಲಾಯಿತು. ವಿದ್ಯಾರ್ಥಿನಿಯರಾದ ಶ್ರೀ ದೇವಿ ಇ, ಅನನ್ಯ ಎಂ ಮತ್ತು ಸುಶಿತ ಪಿ ಇವರು ಈ ಪುರಸ್ಕಾರವನ್ನು ಶಾಲಾ ಗಣ್ಯರಿಂದ 71ನೇ ಸ್ವಾತಂತ್ರ ದಿನದಂದು ಸ್ವೀಕರಿಸಿದರು.
Subscribe to:
Posts (Atom)




















