Friday, July 25, 2014
ವಿಶ್ವ ಪರಿಸರ ದಿನ - ಪ್ರಥಮ ಬಹುಮಾನ ಪಡೆದ – ಕವನ
ಒಗಟಾಗಿರೋ ಕ್ಷಣಗಳು
ಅದಾವ ಶಿಲ್ಪಿ ಕಡೆದನೋ ನಿನ್ನ
ಅದೆಂಥಾ ಕಾಂತಿಯೋ ನಿನ್ನೀ ಬಣ್ಣ
ಭಾರತಕ್ಕೊಲಿದೆ ತಾಯಿಯಾಗಿ
ಪರಿಪಾಲಿಸಿ ಎಲ್ಲರನು ಜಗದ ಮಾಯೆಯಾಗಿ .
ಸ್ವರ್ಗಕ್ಕಿಂತಲೂ ಮಿಗಿಲು
ಪ್ರಕೃತಿಯೇ ನಿನ್ನ ವಿಶಾಲ ಮಡಿಲು
ಅದ್ಯಾವ ದುಷ್ಟ ಕರಗಳಿಗೆ ಬಲಿಯಾಗಿದೆ
ಯಾವ ಭಕ್ತನಿಗೂ ಒಲಿಯದಾದೆ .
ತರುಲತೆಗಳೆ , ವನಸಿರಿಗಳೆ
ನಿನ್ನೀ ಬಂಗಾರ , ಶೃಂಗಾರ
ತುಂಬಿಹುದು ನಿನ್ನ ಮೇಲೆ
ಸುಟ್ಟು ಹೋಗುತಿದೆ ನಿನ್ನೀ ಒಡಲಾಳ .
ಗಿರಿಗಳೆಡೆಯಲಿ ವನಸಿರಿಗಳಿಂದ
ಅಂದವನು ತುಂಬಿರುವೆ
ಯಾಕೆ ಹೀಗಾದೆ ( ಪ್ರಕೃತಿ )
ಜೇನ ಹೀರಿ ಬಿಟ್ಟ ಹೂವಂತೆ .
ಸ್ವರ್ಗವೇ ಮನಸೋಲುವಂತೆ
ಮೆರೆದಿದ್ದೆ ಒಂದು ಕಾಲದಲ್ಲಿ
ಉಪಯೋಗಿಸಿ ಎಸೆದಂತೆ ಆಡಿದರು ,
ನೋಯಿಸಿದರು ಕಣಕಣದಲ್ಲಿ .
ಕುಕ್ಕಿಕುಕ್ಕಿ ಸಾಯುತಿದೆ ಹೃದಯ
ಅದಾವ ಜನ್ಮದ ಬಂಧುವೋ ನೀನು
ಕ್ಷಮೆಯಿರಲಿ ಸುತರಲ್ಲಿ
ಗತಿನೀನೆ ಆದಿಯಲಿ .
ರಶ್ಮಿ . X D
ವಿಶ್ವ ಪರಿಸರ ದಿನ - ಪ್ರಥಮ ಬಹುಮಾನ
ಪಡೆದ – ಕವನ
ಒಗಟಾಗಿರೋ ಕ್ಷಣಗಳು
ಅದಾವ ಶಿಲ್ಪಿ ಕಡೆದನೋ
ನಿನ್ನ
ಅದೆಂಥಾ ಕಾಂತಿಯೋ ನಿನ್ನೀ
ಬಣ್ಣ
ಭಾರತಕ್ಕೊಲಿದೆ ತಾಯಿಯಾಗಿ
ಪರಿಪಾಲಿಸಿ ಎಲ್ಲರನು ಜಗದ
ಮಾಯೆಯಾಗಿ .
ಸ್ವರ್ಗಕ್ಕಿಂತಲೂ
ಮಿಗಿಲು
ಪ್ರಕೃತಿಯೇ ನಿನ್ನ
ವಿಶಾಲ ಮಡಿಲು
ಅದ್ಯಾವ ದುಷ್ಟ ಕರಗಳಿಗೆ ಬಲಿಯಾಗಿದೆ
ಯಾವ ಭಕ್ತನಿಗೂ
ಒಲಿಯದಾದೆ .
ತರುಲತೆಗಳೆ , ವನಸಿರಿಗಳೆ
ನಿನ್ನೀ ಬಂಗಾರ , ಶೃಂಗಾರ
ತುಂಬಿಹುದು ನಿನ್ನ ಮೇಲೆ
ಸುಟ್ಟು ಹೋಗುತಿದೆ ನಿನ್ನೀ
ಒಡಲಾಳ .
ಗಿರಿಗಳೆಡೆಯಲಿ ವನಸಿರಿಗಳಿಂದ
ಅಂದವನು ತುಂಬಿರುವೆ
ಯಾಕೆ ಹೀಗಾದೆ
( ಪ್ರಕೃತಿ )
ಜೇನ ಹೀರಿ
ಬಿಟ್ಟ ಹೂವಂತೆ .
ಸ್ವರ್ಗವೇ ಮನಸೋಲುವಂತೆ
ಮೆರೆದಿದ್ದೆ ಒಂದು ಕಾಲದಲ್ಲಿ
ಉಪಯೋಗಿಸಿ ಎಸೆದಂತೆ ಆಡಿದರು ,
ನೋಯಿಸಿದರು ಕಣಕಣದಲ್ಲಿ .
ಕುಕ್ಕಿಕುಕ್ಕಿ ಸಾಯುತಿದೆ
ಹೃದಯ
ಅದಾವ ಜನ್ಮದ
ಬಂಧುವೋ ನೀನು
ಕ್ಷಮೆಯಿರಲಿ ಸುತರಲ್ಲಿ
ಗತಿನೀನೆ ಆದಿಯಲಿ .
ರಶ್ಮಿ . X D
ವಿಶ್ವ ಪರಿಸರ ದಿನ – ದ್ವಿತೀಯ ಬಹುಮಾನ ಪಡೆದ - ಕವನ
ಹಸಿರು ಬನ
ನಮ್ಮಯ ಸುಂದರ ನಾಡೊಳು
ಇರುತಿಹ ವರವೇ ಹಸಿರು ಬನ
ಹಸಿರು ಬನದಿಂದ ಲಭಿಸುವ ಶುದ್ಧ
ಅನಿಲದಿಂದಲೇ ಜೀವನ .
ಗುಲಾಬಿ - ಮಲ್ಲಿಗೆ - ಗೋರಟೆ - ಸಂಪಿಗೆ
ನಿಂತಿವೆ ತಲೆಯನು ಎತ್ತಿ
ನನಗಿದೊ ಸಂತಸವಾಗಿದೆ
ನಮ್ಮಯ ಹಸಿರು ಬನವನು ಸುತ್ತಿ .
ಬಾಳೆ - ತೆಂಗು - ತಾಳೆ - ಕಂಗು
ಗಗನ ಚುಂಬಿಸುತ ನಿಂತಿಹರು
ನಮ್ಮೆಲ್ಲರ ಈ ನೆಚ್ಚಿನ ಬನದಲಿ
ಅಳಿಲು - ಮಂಗಗಳು ನಗುತಿಹರು .
ಹುಲ್ಲಿನ ಹಾಸಿಗೆಯೊಂದಿಗೆ ನಮಗೆ
ಸಿಗುವುದು ಮನ : ಶಾಂತಿ
ಅದರೊಂದಿಗೆ ಒಳಗೊಂಡಿದೆ ನಮ್ಮ
ಸೂರ್ಯ ಚಂದ್ರರ ಶುಭ ಕಾಂತಿ .
ನಮ್ಮಯ ಊರಲಿ ಎದ್ದು ನಿಂತಿರುವ
ಹಸಿರು ಬನದಿಂದ ಜೀವನ
ಮರಗಳ ಸಾಕಿ ಸಲಹುದರೊಂದಿಗೆ
ಆಗುವುದು ಜೀವನ – ಪಾವನ .
ಎಲ್ಲರು ಬನ್ನಿ ಅಳಿವಿನ ಅಂಚಿನ
ಹಸಿರು ಬನವನ್ನು ಉಳಿಸೋಣ
ಹಸಿರು ಬನವನ್ನು ಉಳಿಸಿ ನಾವು
ನೆಮ್ಮದಿಯಿಂದ ಬದುಕೋಣ .
ಶ್ರದ್ಧಾ . X D
ವಿಶ್ವ ಪರಿಸರ ದಿನ –
ದ್ವಿತೀಯ ಬಹುಮಾನ ಪಡೆದ - ಕವನ
ಹಸಿರು ಬನ
ನಮ್ಮಯ ಸುಂದರ ನಾಡೊಳು
ಇರುತಿಹ ವರವೇ ಹಸಿರು
ಬನ
ಹಸಿರು ಬನದಿಂದ ಲಭಿಸುವ
ಶುದ್ಧ
ಅನಿಲದಿಂದಲೇ ಜೀವನ .
ಗುಲಾಬಿ - ಮಲ್ಲಿಗೆ - ಗೋರಟೆ - ಸಂಪಿಗೆ
ನಿಂತಿವೆ ತಲೆಯನು
ಎತ್ತಿ
ನನಗಿದೊ ಸಂತಸವಾಗಿದೆ
ನಮ್ಮಯ ಹಸಿರು
ಬನವನು ಸುತ್ತಿ .
ಬಾಳೆ - ತೆಂಗು - ತಾಳೆ - ಕಂಗು
ಗಗನ ಚುಂಬಿಸುತ ನಿಂತಿಹರು
ನಮ್ಮೆಲ್ಲರ ಈ ನೆಚ್ಚಿನ
ಬನದಲಿ
ಅಳಿಲು -
ಮಂಗಗಳು ನಗುತಿಹರು .
ಹುಲ್ಲಿನ ಹಾಸಿಗೆಯೊಂದಿಗೆ ನಮಗೆ
ಸಿಗುವುದು ಮನ : ಶಾಂತಿ
ಅದರೊಂದಿಗೆ ಒಳಗೊಂಡಿದೆ
ನಮ್ಮ
ಸೂರ್ಯ ಚಂದ್ರರ
ಶುಭ ಕಾಂತಿ .
ನಮ್ಮಯ ಊರಲಿ ಎದ್ದು
ನಿಂತಿರುವ
ಹಸಿರು ಬನದಿಂದ ಜೀವನ
ಮರಗಳ ಸಾಕಿ ಸಲಹುದರೊಂದಿಗೆ
ಆಗುವುದು ಜೀವನ – ಪಾವನ .
ಎಲ್ಲರು ಬನ್ನಿ
ಅಳಿವಿನ ಅಂಚಿನ
ಹಸಿರು ಬನವನ್ನು
ಉಳಿಸೋಣ
ಹಸಿರು ಬನವನ್ನು
ಉಳಿಸಿ ನಾವು
ನೆಮ್ಮದಿಯಿಂದ ಬದುಕೋಣ
.
ಶ್ರದ್ಧಾ . X D
Subscribe to:
Posts (Atom)
