Saturday, September 21, 2019

ಮಂಜೇಶ್ವರ ಉಪಜಿಲ್ಲಾ ಮಟ್ಟದ ಮೂರು ದಿನಗಳ ಆವಾಸಿಯ ಸಂಸ್ಕೃತ ಶಿಬಿರ ಶ್ರಿ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಉದ್ಘಾಟನೆ ಗೊಂಡಿತು.

    ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಜೆ ಉದ್ಘಾಟಿಸಿದರು. ಸಹಾಯಕ ಶಿಕ್ಷಣಾಧಿಕಾರಿ ದಿನೇಶ ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್ ಮಾತಾಡಿ ಶಿಬಿರವು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದರು ಜೊತೆಗೆ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಅಗಲ್ಪಾಡಿ ಅನ್ನಪೂರ್ಣೇಶ್ವರಿ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀನಿವಾಸ ಭಟ್ ಮುಖ್ಯ ಅಥಿತಿಗಳಾಗಿ ಮಾತಾಡಿ ಸಂಸ್ಕೃತ ಭಾಷೆಯ ಮಹತ್ವ ತಿಳಿಸಿದರು ಇದೇ ಸಂದರ್ಭದಲ್ಲಿ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. 
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು.
19 ಶಾಲೆಯ ಆಯ್ದ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದರು.

ಶಾಲಾ ಮನೇಜರ್ ಶಂಕರನಾರಾಯಣ ಭಟ್,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದ ಭಟ್, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್, ಎ ಯು ಪಿ ಶಾಲ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು.








Monday, September 16, 2019

ಪುತ್ತಿಗೆ ಕೃಷಿ ಭವನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಕೃಷಿ ಸಂಬಂಧಿ ರಸ ಪ್ರಶ್ನೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದ ದುರ್ಗಾ ಪರಮೇಶ್ವರೀ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ ಗಣಪತಿ ಹಾಗೂ ವಿಶ್ವಜಿತ್ ಕೆ ಶಾಲಾ ಮುಖ್ಯೋಪಾಧ್ಯಾಯರೊಂದಿಗೆ....




Thursday, September 12, 2019

Friday, September 06, 2019


ಶ್ರೀ ದುರ್ಗಾಪರಮೇಶ್ವರಿ ಪ್ರೌಡ ಶಾಲೆಯ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೇವನ ಪ್ರಾರಂಭಿಸಿ ಒಂಬತ್ತು ವರ್ಷಗಳಿಂದ ಮುಖ್ಯೊಪಾದ್ಯಾಯರಾಗಿ ಕಾರ್ಯನಿರ್ವಹಿಸಿ, ಹೈಯರ್ ಸೆಕಂಡರಿ ಶಾಲೆಯ ಪ್ರಾಂಶುಪಾಲ ಹಾಗೂ ಕನ್ನಡ ಅಧ್ಯಾಪಕರಾಗಿ ಮುಂಭಡ್ತಿ ಹೊಂದಿದ ಶ್ರೀ ಎನ್ ರಾಮಚಂದ್ರ ಭಟ್ ನೇರೋಳು @⁨Nrb⁩  ಹಾಗೂ ಜೀವಶಾಸ್ತ್ರ ಅಧ್ಯಾಪಕರಾದ ಗೋವಿಂದ ಭಟ್ ಇ ಎಚ್ ಎಡಕ್ಕಾನ @⁨Govindha Bhat⁩  ಇವರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಮುಂಭಡ್ತಿ ಹೊಂದಿದರು ಇಬ್ಬರಿಗೂ  ಅಭಿನಂದನೆಗಳು sir…




#ಓಣಂ ಹಬ್ಬ ನಮ್ಮ  ಶಾಲೆಯಲ್ಲಿ ಪುಟ್ಟ #ಪೂಕಳಂ


Thursday, September 05, 2019

ಮುಖ್ಯಮಂತ್ರಿ ಅಪೇಕ್ಷಿತ ಕೇರಳ ನೆರೆ ಸಂತ್ರಸ್ತರ  ಪರಿಹಾರ ನಿಧಿಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಅಧ್ಯಪಾಕ ವೃಂದ, ವಿದ್ಯಾರ್ಥಿ ಗಳಿಂದ ದೇಣಿಗೆ ಸಂಗ್ರಹ.