Wednesday, June 26, 2019

ಕಾಸರಗೋಡು ಸರಕಾರಿ ಆಸ್ಪತ್ರೆಯ tribal wing ನ ನೇತೃತ್ವದಲ್ಲಿ ಇಂದು ಧರ್ಮತ್ತಡ್ಕ ಗ್ರಂಥಾಲಯದ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.ಇದರಲ್ಲಿ ನಮ್ಮ ಶಾಲೆಯ ಸುಮಾರು 60 SC/ ST ಮಕ್ಕಳು ಭಾಗವಹಿಸಿದರು.


Sunday, June 23, 2019

Friday, June 21, 2019

ಧರ್ಮತ್ತಡ್ಕ : ಕ್ಲಬ್ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳೆಸಲು ಸಾಧ್ಯ. ಇದರಿಂದ ಅವರಿಗೆ ಆತ್ಮ ಸ್ಥೆರ್ಯ ತುಂಬುವುದು ಎಂದು  ಮುಖ್ಯೋಪಾಧ್ಯಾಯರಾದ  ಎನ್. ರಾಮಚಂದ್ರ ಭಟ್ ತಿಳಿಸಿದರು. ಇವರು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಶಾಲಾ ವಿವಿಧ ಕ್ಲಬ್ ಗಳನ್ನು ಉದ್ಗಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಶ್ರೀ ಈ ಯಚ್ ಗೋವಿಂಧ ಭಟ್, ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಉಷಾ ಕೆ ಆರ್ ಇವರು ಕ್ಲಬ್ ಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 10ಕ್ಕಿಂತಲೂ ಹೆಚ್ಚು ಕ್ಲಬ್ ಗಳು ರೂಪೀಕರಿಸಲ್ಪಟ್ಟು ಸದಸ್ಯರಿಂದ ಪ್ರಭಂದ ಮಂಡನೆ, ಹಾಡು ಮುಂತಾದ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಶಾರಧ ಸುರಭಿ ಸ್ವಾಗತಿಸಿ ,ವಿವೇಕ್ ರೈ ವಂದಿಸಿದರು. ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು. 









Wednesday, June 19, 2019

Wednesday, June 12, 2019

Sunday, June 09, 2019

ಪರಿಸರ ದಿನಾಚರಣೆಯ ಅಂಗವಾಗಿ ಧರ್ಮತ್ತಡ್ಕ ಶ್ರೀ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಎನ್. ರಾಮಚಂದ್ರ ಭಟ್ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಅಧ್ಯಾಪಕರಾದ ಶಶಿಕುಮಾರ್ ಪಿ., ಶಿವಪ್ರಸಾದ್ ಚೆರುಗೋಳಿ, ಪ್ರಶಾಂತ ಹೊಳ್ಳ ಎನ್., ವಿದ್ಯಾ ಸರಸ್ವತಿ, ವಿಚೇತ, ಗಂಗಮ್ಮ ಸಹಕರಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಟ್ಟರು.