ಧರ್ಮತ್ತಡ್ಕ : ಕ್ಲಬ್ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳೆಸಲು ಸಾಧ್ಯ. ಇದರಿಂದ ಅವರಿಗೆ ಆತ್ಮ ಸ್ಥೆರ್ಯ ತುಂಬುವುದು ಎಂದು ಮುಖ್ಯೋಪಾಧ್ಯಾಯರಾದ ಎನ್. ರಾಮಚಂದ್ರ ಭಟ್ ತಿಳಿಸಿದರು. ಇವರು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಶಾಲಾ ವಿವಿಧ ಕ್ಲಬ್ ಗಳನ್ನು ಉದ್ಗಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಶ್ರೀ ಈ ಯಚ್ ಗೋವಿಂಧ ಭಟ್, ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಉಷಾ ಕೆ ಆರ್ ಇವರು ಕ್ಲಬ್ ಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 10ಕ್ಕಿಂತಲೂ ಹೆಚ್ಚು ಕ್ಲಬ್ ಗಳು ರೂಪೀಕರಿಸಲ್ಪಟ್ಟು ಸದಸ್ಯರಿಂದ ಪ್ರಭಂದ ಮಂಡನೆ, ಹಾಡು ಮುಂತಾದ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಶಾರಧ ಸುರಭಿ ಸ್ವಾಗತಿಸಿ ,ವಿವೇಕ್ ರೈ ವಂದಿಸಿದರು. ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು.
Friday, June 21, 2019
Wednesday, June 19, 2019
Wednesday, June 12, 2019
Sunday, June 09, 2019
ಪರಿಸರ ದಿನಾಚರಣೆಯ ಅಂಗವಾಗಿ ಧರ್ಮತ್ತಡ್ಕ ಶ್ರೀ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಎನ್. ರಾಮಚಂದ್ರ ಭಟ್ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಅಧ್ಯಾಪಕರಾದ ಶಶಿಕುಮಾರ್ ಪಿ., ಶಿವಪ್ರಸಾದ್ ಚೆರುಗೋಳಿ, ಪ್ರಶಾಂತ ಹೊಳ್ಳ ಎನ್., ವಿದ್ಯಾ ಸರಸ್ವತಿ, ವಿಚೇತ, ಗಂಗಮ್ಮ ಸಹಕರಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಟ್ಟರು.
Sunday, June 02, 2019
ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ನಿವೃತ್ತಿಯಾಗದಿದ್ದರೆ ಮಾನಸಿಕ ನೆಮ್ಮದಿ ಶತಃಸಿದ್ಧ ಎಂದು ಧರ್ಮತ್ತಡ್ಕ ಶ್ರೀ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಅಭಿಪ್ರಾಯಪಟ್ಟರು.
ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ 26 ವರ್ಷಗಳ ಕಾಲ ಕನ್ನಡ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸುನಿತಾ ಟೀಚರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಸಂಚಾಲಕಿ ಶಾರದಾಮ್ಮ, ಮುಖ್ಯೋಪಾಧ್ಯಾಯ ಎನ್. ರಾಮಚಂದ್ರ ಭಟ್, ಎನ್. ಮಹಾಲಿಂಗ ಭಟ್ ಮತ್ತು ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಬೀಳ್ಕೊಡುತ್ತಿರುವ ಅಧ್ಯಾಪಿಕೆಗೆ ಶುಭ ಹಾರೈಸಿದರು. ಹಿರಿಯರಾದ ಶಾರದಮ್ಮ ನೇರೋಳು ಅವರು ಅಧ್ಯಾಪಿಕೆಗೆ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು. ಅಧ್ಯಾಪಕರಾದ ನರಸಿಂಹ ರಾಜ್, ಅಶೋಕ್, ಶ್ವೇತ ಟೀಚರ್, ಸತೀಶ್ ಶೆಟ್ಟಿ, ಈಶ್ವರಿ ಮತ್ತಿತರರು ಶುಭಾಶಂಸನೆಗೈದರು. ಗೋವಿಂದ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶ್ರೀ ಸೂಕ್ತಿ ಗುರುಪೀಠ ದೀಪವಿದ್ದಂತೆ. ಅದರ ಬತ್ತಿ ಎಣ್ಣೆಗಳು ಶಿಷ್ಯರು. ಶಿಷ್ಯರ ಆತ್ಮೋದ್ಧಾರ ಗುರುವಿನದಾದರೆ; ಗುರುವಿನ ದೇಹದ ಕಾಳಜಿ ಶಿಷ್ಯರದ್ದಾಗಿರುತ್ತದೆ.
ವೃತ್ತಿ ಕ್ಷೇತ್ರದಲ್ಲಿ ನನ್ನ ಗುರುಗಳಾದ ಶ್ರೀ ಮತಿ ಸುನೀತಾ ಟೀಚರ್ ಅವರಿಗೆ ಅಭಿನಂದನೆಗಳು Suneetha K Sajankila
Tuesday, May 21, 2019
Subscribe to:
Posts (Atom)













