Wednesday, October 03, 2018

SATHWIK KRISHNA N (10D) Standard Got First Place in Manjeshwara Sub District Level Swadesh Mega Quiz Competition for HS held @ GHSS MANGALPADY.



SCHOOL LEVEL SASTHROLSAVAM


School level sasthrolsavam 2018-19 held on 22-09-2018 saturday.  More than 100 Students took part in different competitions.






 

Sunday, September 16, 2018

ಧರ್ಮತ್ತಡ್ಕ ವಿದ್ಯಾಲಯದಲ್ಲಿ ಆಟೋಟ ಸ್ಪರ್ಧೆ :

ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ  ವಿದ್ಯಾಲಯದಲ್ಲಿ ಶಾಲಾ ಮಟ್ಟದ ಆಟೋಟ ಸ್ಪರ್ಧೆಯು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್ ಕಯ್ಯಾರ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಅತಿಥಿಗಳನ್ನು ಸ್ವಾಗತಿಸಿ ಶುಭಹಾರೈಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಯನ್ ಶಂಕರನಾರಾಯಣ ಭಟ್ ಮತ್ತು ಎ ಯು ಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ಮಹಾಲಿಂಗ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಾಪಕರಾದ ಶ್ರೀ ರಾಮಕೃಷ್ಣ ಭಟ್ ವಂದಿಸಿ, ಶ್ರೀ ಗೋವಿಂದ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಸಂತೋಷ್ ಕುಮಾರ್ ಇವರ ನೇತೃತ್ವದಲ್ಲಿ ಅಧ್ಯಾಪಕರ ಸಹಾಯದೊಂದಿಗೆ ಸುಮಾರು 13ಕ್ಕೂ ಹೆಚ್ಚು ವಿಭಾಗ ಕ್ರೀಡೆಗಳಲ್ಲಿ 300ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡರು. 


























 
SATHWIK KRISHNA N ( X D) got second place in Manjeshwar sub dist level Hindi day Quiz held on 15-09-2018 @ GHSS Bangaramanjeshwar.




Wednesday, September 12, 2018

11 - 09 -2018ರಂದು ಶಾಲಾ ಮಟ್ಟದ ಹಿಂದಿ ಕ್ವಿಜ್ ಕಾರ್ಯಕ್ರಮ ಜರಗಿತು. 

ಫಲಿತಾಂಶ 

ಪ್ರಥಮ : ಸಾತ್ವಿಕ್  ಕೃಷ್ಣ ಯನ್  X  D 

ದ್ವಿತೀಯ  : ವಿವೇಕ್ ರೈ  I X   D 

Thursday, August 30, 2018

ಧರ್ಮತ್ತಡ್ಕ ಶಾಲೆಯಲ್ಲಿ 72ನೇ ಸ್ವಾತಂತ್ರ  ದಿನಾಚರಣೆ:
ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 72ನೇ ಸ್ವಾತಂತ್ರ  ದಿನಾಚರಣೆ  ಪಿ ಟಿ ಎ ಅಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್ ಕಯ್ಯಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು . ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಧ್ವಜಾರೋಹಣ ಗೈಯುವುದರೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಿವೃತ್ತ  ಸಿ ಆರ್ ಪಿಫ್ ಯೋಧ ಶ್ರೀ ಅಯ್ಯಪ್ಪ ಮಣಿಯಾಣಿ ಮತ್ತು ಪ್ಯಾರಾ ಮಿಲಿಟರಿ ಕಮಾಂಡೋ ಆಗಿರುವ ಶ್ರೀ ಸನೇಶ್  ಕುಮಾರ್ ಉಪ್ಪಳ ಇವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡರು. ಮುಖ್ಯ ಅಥಿತಿಗಳಿಂದ ಮಿಲಿಟರಿ ಸೇನೆ ಮತ್ತು ದೇಶಕ್ಕೆ ಅದರ ಮಹತ್ವದ  ಕುರಿತು ಸಂವಾದ ಕಾರ್ಯಕ್ರಮವು ನಡೆಯಿತು. ರಾಜ್ಯ ಪ್ರಶಸ್ತ ವಿಜೇತ ಶ್ರೀ ಶಂಕರ ಕಾಮತ್ ಚೇವಾರ್ ಮತ್ತು ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮವು ಜರಗಿದವು. ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಗಣ್ಯರನ್ನು ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು. ಶಿಕ್ಷಕರಾದ ಶ್ರೀ ಈ ಯಚ್ ಗೋವಿಂಧ ಭಟ್ ಕಾರ್ಯಕ್ರವನ್ನು ನಿರೂಪಿಸಿದರು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.