Thursday, July 12, 2018

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ  2018-2019

ಧರ್ಮತ್ತಡ್ಕ : ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ  ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 12-07-2018ರಂದು ಜರಗಿತು. ಸಂಘದ ಅಧ್ಯಕ್ಷ ಶ್ರೀ ಸುಂದರ ಶೆಟ್ಟಿ  ಅಧ್ಯಕ್ಷತೆ ವಹಿಸಿದರು. ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಪ್ರಾಸ್ತಾವಿಕ ಭಾಷಣ ಹಾಗೂ ಶಾಲಾ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರನಾರಾಯಣ ಭಟ್ ಶಾಲಾ ಅಭಿವೃದ್ಧಿ ಯೋಜನೆಯ ಕುರಿತು ಮಾತನಾಡಿದರು.ಶ್ರೀಮತಿ ಈಶ್ವರೀ ಡಿ ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಾಲಿನ PTA ಅಧ್ಯಕ್ಷರಾಗಿ ಶ್ರೀ ಗಿರೀಶ್ ಕುಮಾರ್ ,MPTA ಅಧ್ಯಕ್ಷೆಯಾಗಿ ಶ್ರೀಮತಿ ವಿಲ್ಮಾ ,PTA ಉಪಾಧ್ಯಕ್ಷರಾಗಿ  ಶ್ರೀ ಸುಂದರ ಶೆಟ್ಟಿ ,MPTA ಉಪಾಧ್ಯಕ್ಷೆಯಾಗಿ ಶ್ರೀಮತಿ ಪುಷ್ಪ  ಇವರು ಅವಿರೋಧವಾಗಿ ಆಯ್ಕೆಗೊಂಡರು.ಅಲ್ಲದೆ 18 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಶಾಲಾ ಅಧ್ಯಾಪಕ ಶ್ರೀ ಸತೀಶ್ ಕುಮಾರ್ ಶೆಟ್ಟಿ  ಅವರು ಶಿಸ್ತು ಮತ್ತು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು.ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶಾಲಾ ಅಧ್ಯಾಪಕ ಶ್ರೀ ಗೋವಿಂಧ ಭಟ್ ಇವರು ಸ್ವಾಗತಿಸಿ, ಶ್ರೀ ನರಸಿಂಹ ರಾಜ್ ವಂದಿಸಿದರು. ಶ್ರೀಮತಿ ಉಮಾ ದೇವಿ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ  ಲಘು ಉಪಹಾರವನ್ನು ನೀಡಲಾಯಿತು 








Thursday, July 05, 2018

BIRTHDAY CELEBRATION

kumar SATHWIK KRISHNA N (X D) celebrated his birthday, presenting 1 valuable books to the school libray. the school principal, Manager, &  school staffs  wish him and his parents a bright and glorious future.



Friday, June 29, 2018

ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ  ಧರ್ಮತ್ತಡ್ಕದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ: 
ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ  ಧರ್ಮತ್ತಡ್ಕದಲ್ಲಿ ನೂತನ ಶೆಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ವಿಜ್ಞಾನ ಪ್ರಯೋಗದ ಮೂಲಕ ಉದ್ಘಾಟಿಸಿದರು. ಶಿಕ್ಷಕರಾದ ಶ್ರೀ ಕೆ ನರಸಿಂಹ ಭಟ್, ಶ್ರೀ ಗೋವಿಂಧ ಭಟ್, ಶ್ರೀ ಅಶೋಕ್ ಕುಮಾರ್ ಟಿ ಶುಭ ಹಾರೈಸಿದರು. ವಿವಿಧ ಕ್ಲಬ್ ಗಳ ಪದಾಧಿಕಾರಿಗಳನ್ನೂ ಕ್ಲಬ್ ನ ಸದಸ್ಯರಿಂದ ಆರಿಸಲಾಯಿತು. ವಿದ್ಯಾರ್ಥಿಗಳಾದ ಸ್ವರ್ಣ ಕೆ ಸ್ವಾಗತಿಸಿ, ವಿಜ್ಞೇಶ ವಂದಿಸಿದರು. ಧನ್ಯ ಶ್ರೀ ನಿರೂಪಿಸಿದರು. 





Monday, June 25, 2018



ಮುಸ್ಸಂಜೆ


ಬಾನಿಂದಿಳಿದನು
 
ಬೆಳಗಿನ ಸೂರ್ಯನು
 
ಸಂಜೆಯ ಸಮಯದಲಿ

ಆಡುವ ಮಕ್ಕಳ 
 
ಬಳಗವು ಸಾಗಿತು
 
ಮನೆಕಡೆ ನಲಿಯುತಲಿ


ಚಿಲಿಪಿಲಿ ಗುಟ್ಟುತ 
 
ಹಕ್ಕಿಯ ಬಳಗವು 
 
ಸಾಗಿತು ಬಾನಿನಲಿ


ನಗೆಯನು ಬೀರುತ 
 
ಚಂದಿರ ಬಂದನು 
 
ಬಾನಿನ ಅಂಗಳದಿ 



ರಚನೆ : 8ನೇ ತರಗತಿಯ ಮಕ್ಕಳು
 

Thursday, June 21, 2018

ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಯೋಗ ದಿನಾಚರಣೆ :

ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಯೋಗ ದಿನವನ್ನು  ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ಶ್ರೀಯುತ ಜಗದೀಶ್ ಪ್ರತಾಪ್ ನಗರ್ ಇವರ ಉಪಸ್ಥಿತಿಯಲ್ಲಿ ಜರಗಿತು. ಶಾಲಾ
ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಗದೀಶ್ ಪ್ರತಾಪ್ ನಗರ್ ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರಲ್ಲದೆ ಯೋಗದ ವಿವಿಧ ಆಸನಗಳನ್ನು ಪ್ರ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಶಾಲಾ ಅಧ್ಯಾಪಕ ಶ್ರೀಯುತ ಗೋವಿಂದ ಭಟ್ ಸ್ವಾಗತಿಸಿ, ಶ್ರೀಮತಿ ಸುನೀತಾ ಕೆ ವಂದಿಸಿದರು.
ಶ್ರೀಯುತ ಶಿವನಾರಾಯಣ ಭಟ್ ಇವರು ಕಾರ್ಯಕ್ರಮ ನಿರೂಪಿಸಿದರು.