27-09-2017ರಂದು ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ನಡೆಯಿತು. PTA ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಅಧ್ಯಕ್ಷತೆ ವಹಿಸಿದರು. ಶಾಲಾ ಮ್ಯಾನೇಜರ್ ಶ್ರೀ ಶಂಕರ ನಾರಾಯಣ ಭಟ್ ಶುಭ ಹಾರೈಸಿದರು. ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ರಕ್ಷಕರ ಜವಾಬ್ದಾರಿಯನ್ನು ನೆನಪಿಸಿದರು.
ಅರೋಗ್ಯ ಇಲಾಖೆಯ ಅರೋಗ್ಯ ಅಧಿಕಾರಿಗಳು, ಸಹಾಯಕರು ಇಲಾಖೆಯಿಂದ ನೀಡುವ ಚುಚ್ಚುಮದ್ದುಗಳ ಕುರಿತು ಮಾಹಿತಿ ನೀಡಿದರು.
ದೇಶಾಭಿಮಾನಿ ಅಕ್ಷರಮುಟ್ಟಂ ರಸಪ್ರಶ್ನೆಯು 27-09-2017ರಂದು ನಡೆಯಿತು.
ಫಲಿತಾಂಶ
I ) ಸಾತ್ವಿಕ್ ಕೃಷ್ಣ ಯನ್ 9D
II ) ಅಪೂರ್ವ ಎಡಕ್ಕಾನ 10C
ಶಾಲಾ ಮಟ್ಟದ ಗಣಿತ ರಸಪ್ರಶ್ನೆಯು 27-09-2017ರಂದು ನಡೆಯಿತು.
ಫಲಿತಾಂಶ
I ) ಕೃಷ್ಣ ಶರ್ಮ X C
II ) ವಿಶ್ವಜಿತ್ ಕೆ 8 C
III ) ಪ್ರಣವ ಕುಮಾರ್ ಯನ್ X C
ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆದು ಆಯ್ಕೆಯಾದ SPL,ASPL ಹಾಗೂ
ಗೃಹ , ಕೃಷಿ
, ಆರೋಗ್ಯ
, ಸಾಂಸ್ಕೃತಿಕ ಸಚಿವರು ಶಾಲಾ ವಿಶೇಷ ಎಸೆಂಬ್ಲಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರತಿಜ್ಞೆ ಭೋದಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ "ಸ್ವಚ್ಛತೆಯ ಸೇವೆ"ಗೆ ನಮ್ಮ ಶಾಲೆಯ ಮಕ್ಕಳಿಗೆ ಏರ್ಪಡಿಸಿದ ಸ್ಪರ್ಧೆಗಳು
ಪ್ರಧಾನಿ ನರೇಂದ್ರ ಮೋದಿಯವರ "ಸ್ವಚ್ಛತೆಯ ಸೇವೆ"ಗೆ ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಾಲನೆ :
ದಿನಾಂಕ 25-09-2017ನೇ ಸೋಮವಾರದಂದು ಶಾಲೆಯಲ್ಲಿ PTA ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಇವರಿಂದ ಚಾಲನೆ. ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರ ನಾರಾಯಣ ಭಟ್ , ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್, ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ಮಹಾಲಿಂಗ ಭಟ್ ಶುಭ ಹಾರೈಸಿದರು.