Sunday, July 23, 2017

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ 

ಧರ್ಮತ್ತಡ್ಕ : ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ  ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 22-07-2017ರಂದು ಜರಗಿತು. ಸಂಘದ ಅಧ್ಯಕ್ಷ ಶ್ರೀ ಸುಂದರ ಶೆಟ್ಟಿ  ಅಧ್ಯಕ್ಷತೆ ವಹಿಸಿದರು. ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಪ್ರಾಸ್ತಾವಿಕ ಭಾಷಣ ಹಾಗು ಲೆಕ್ಕ ಪತ್ರ ಮಂಡಿಸಿದರು. ಶಾಲಾ ಮ್ಯಾನೇಜರ್ ಶ್ರೀ ಶಂಕರನಾರಾಯಣ ಭಟ್ ಶಾಲಾ ಅಭಿವೃದ್ಧಿ ಯೋಜನೆಯ ಕುರಿತು ಮಾತನಾಡಿದರು.ಶ್ವೇತಾ ಟೀಚರ್ ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಾಲಿನ PTA ಅಧ್ಯಕ್ಷರಾಗಿ ಶಂಕರ ಕಾಮತ್, MPTA ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ,PTA ಉಪಾಧ್ಯಕ್ಷರಾಗಿ  ಶ್ರೀ ಸುಂದರ ಶೆಟ್ಟಿ ,MPTA ಉಪಾಧ್ಯಕ್ಷೆಯಾಗಿ ಶೈಲಜಾ ಇವರು ಅವಿರೋಧವಾಗಿ ಆಯ್ಕೆಗೊಂಡರು. ಅಲ್ಲದೆ 17   ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಶಾಲಾ ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ  ಅವರು ಶಿಸ್ತು ಮತ್ತು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು. ಅಧ್ಯಾಪಕ ಶ್ರೀ ಗೋವಿಂದ  ಭಟ್ ಅವರು ವ್ಯಕ್ತಿ ಶುಚಿತ್ವ ಮತ್ತು ಆರೋಗ್ಯದ ಕುರಿತು ತರಗತಿ ನಡೆಸಿದರು.ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು.  ಹಿರಿಯ ಅಧ್ಯಾಪಕಿ ಸುನೀತಾ ಕೆ ಪ್ರಾರ್ಥನೆ ಹಾಡಿ  ಸ್ವಾಗತಿಸಿದರು. ಅಧ್ಯಾಪಕಿ ಈಶ್ವರಿ ಡಿ ವಂದಿಸಿದರು. ಶ್ರೀಮತಿ ಉಮಾ ದೇವಿ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ  ಲಘು ಉಪಹಾರವನ್ನು ನೀಡಲಾಯಿತು 







Saturday, July 15, 2017

SCHOOL LEVEL MATHS QUIZ HELD ON 14-07-2017

ಗಣಿತ ಸಂಘದ ಆಶ್ರಯದಲ್ಲಿ ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಕಾರ್ಯಕ್ರಮ ಜೂಲೈ 14 ರಂದು ಜರಗಿತು. ಫಲಿತಾoಶ ಈ ರೀತಿ ಇದೆ. 
1. ವಿಶ್ವಜಿತ್ ಕೆ VIII C 
2. ಸಿಂಜಿತಾ ಕೆ VIII D 
3. ವಿವೇಕ್ ರೈ  VIII D 



Friday, July 07, 2017

ಜುಲೈ 7 2017ರಂದು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಬೇಕೂರು ಶಾಲೆಯ ನಿವೃತ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ರಾಯ ನoದೋಡಿ ಅವರು ತರಗತಿ ನಡೆಸಿದರು. ನೆಲ, ಜಲ, ವಾಯುವಿನ  ಸಂರಕ್ಷಣೆ ನಮ್ಮ ಕರ್ತವ್ಯ. ಇಂದಿನ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಮನುಷ್ಯನ ಅತಿಯಾಸೆಯಿಂದಾಗಿ ನೀರು, ಭೂಮಿ, ಅರಣ್ಯ ನಾಶವಾಗುತ್ತಿದ್ದು, ಇದರಿಂದ ಮನುಷ್ಯ ಸೇರಿದಂತೆ ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನೀರು, ಭೂಮಿ ಮತ್ತು ಗಾಳಿ ಮಲಿನವಾಗುತ್ತಿರುವುದರಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಿಸರ್ಗವನ್ನು ಪುನ: ಸೃಷ್ಟಿಸುವುದು ಕಷ್ಟಸಾಧ್ಯವಾಗಿದ್ದು, ಈ ಕಾರಣಕ್ಕಾಗಿ ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಒತ್ತು ನೀಡಬೇಕಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಸ್ವಾಗತಿಸಿ, ಸಮಾಜ ಅಧ್ಯಾಪಕರಾದ ಸತೀಶ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಶಿವಪ್ರಸಾದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. 






Thursday, July 06, 2017

ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ - ಕನ್ನಡ ವಚನ ಸ್ಪರ್ಧೆ ರಸಪ್ರಶ್ನೆಯು ಇಂದು ನಡೆಯಿತು. ಅದರಲ್ಲಿ 9ನೇ ತರಗತಿಯ ಸಾಥ್ವಿಕ್ ಕೃಷ್ಣ ಪ್ರಥಮ , 10ನೇ ತರಗತಿಯ ಅಪೂರ್ವ ಎಡಕ್ಕಾನ ದ್ವಿತೀಯ , 8ನೇ ತರಗತಿಯ ಶಾರಧ ಸುರಭೀ ತೃತೀಯಾ ಸ್ಥಾನ ಪಡೆದರು.



Friday, June 30, 2017

DISTRIBUTION OF UNIFORMS ಸಮವಸ್ತ್ರ ವಿತರಣೆ: 2017 -18 ನೇ ಶೈಕ್ಷಣಿಕ ವರ್ಷದ ಸಮವಸ್ತ್ರ ವಿತರಣೆಯನ್ನು ದಿನಾಂಕ 30 -06 -2017 ರಂದು ಶಾಲಾ ಪ್ರಾಂಶುಪಾಲರು ವಿತರಿಸಿದರು. 






ವಾಚನ ಸಪ್ತಾಹ ಆಚರಣೆಯ ಅಂಗವಾಗಿ ಸಂಸ್ಕೃತ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ಭಟ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಹಿತವಚನಗಳನ್ನಿತ್ತರು.  ಮುಖ್ಯ ಅಥಿತಿಗಳಾಗಿ ಪರಿಸರ ಸಂಘದ ಅಧ್ಯಾಪಕರಾದ ಶ್ರೀ ನರಸಿಂಹ ರಾಜ ಮಾಸ್ಟರ್ ಆಗಮಿಸಿ ಶುಭಕೋರಿದರು. ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಆದರ್ಶ್ ಇ ಎಚ್ ಸ್ವಾಗತಿಸಿ, ಜತೆಕಾರ್ಯದರ್ಶಿ ಅಪೂರ್ವ ಎಡಕ್ಕಾನ ವಂದಿಸಿದರು. ಸಂಘದ ಕಾರ್ಯದರ್ಶಿ ನವನೀತ ಶೆಟ್ಟಿ ಕಾರ್ಯಕ್ರಮ  ನಿರೂಪಿಸಿದನು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.